ಹಣಕಾಸು ನೀತಿ ಸಮಿತಿ

ಹಣಕಾಸು ನೀತಿ ಸಮಿತಿ

ವಿಷಯ : ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಹಣಕಾಸು ನೀತಿ ಸಮಿತಿ ಸಭೆಯ(ಎಂಪಿಸಿ) ಬಾಹ್ಯ ಸದಸ್ಯರಾಗಿ ರಾಮ್ ಸಿಂಗ್, ಸೌಗತ ಭಟ್ಟಾಚಾರ್ಯ ಮತ್ತು ನಾಗೇಶ್ ಕುಮಾರ್ ಅವರನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ನೇಮಿಸಿದೆ.


ಹಣಕಾಸು ನೀತಿ ಸಮಿತಿಯ ಬಗ್ಗೆ ತಿಳಿಯಿರಿ :

  • ಭಾರತ ಸರ್ಕಾರವು ನಿಗದಿಪಡಿಸಿದ ಹಣದುಬ್ಬರ ದ ಗುರಿಯನ್ನು ಸಾಧಿಸಲು ಹಣಕಾಸು ನೀತಿ ಸಮಿತಿಯು ನೀತಿ ದರಗಳನ್ನು ನಿರ್ಧರಿಸುತ್ತದೆ.
  • ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆ, 1934 (ಆರ್‌ಬಿಐ ಕಾಯಿದೆ) ಅನ್ನು 2016 ರಲ್ಲಿ ಹಣಕಾಸು ಕಾಯಿದೆ ಮೂಲಕ ತಿದ್ದುಪಡಿ ಮಾಡಿ ಹಣಕಾಸು ನೀತಿ ಸಮಿತಿಗೆ ಶಾಸನಬದ್ಧ ಹಾಗೂ ಸಾಂಸ್ಥಿಕ ಚೌಕಟ್ಟನ್ನು ಒದಗಿಸಲಾಗಿದೆ.
  • ಈ ರೀತಿ ತಿದ್ದುಪಡಿ ಮಾಡಿದ ಆರ್‌ಬಿಐ ಕಾಯಿದೆ, 1934 ರ ಸೆಕ್ಷನ್ 45ZB ಅಡಿಯಲ್ಲಿ, ಕೇಂದ್ರ ಸರ್ಕಾರವು ಆರು ಸದಸ್ಯರ ಹಣಕಾಸು ನೀತಿ ಸಮಿತಿಯನ್ನು ರಚಿಸುವ ಅಧಿಕಾರವನ್ನು ಹೊಂದಿದೆ.
  • ಹಣಕಾಸು ನೀತಿ ಸಮಿತಿ ಗಿಂತ ಮುಂಚೆ ತಾಂತ್ರಿಕ ಸಲಹಾ ಸಮಿತಿ ಎಂಬ ಸಮಿತಿ ಅಸ್ತಿತ್ವದಲ್ಲಿತ್ತು. 
  • ಸಂಯೋಜನೆ: ಹಣಕಾಸು ನೀತಿ ಸಮಿತಿಯು ಆರು ಸದಸ್ಯರನ್ನು ಒಳಗೊಂಡಿರುತ್ತದೆ. ಅವರೆಂದರೆ ಆರ್‌ಬಿಐ ಗವರ್ನರ್‌, ಆರ್‌ಬಿಐ ಡೆಪ್ಯುಟಿ ಗವರ್ನರ್‌, ಆರ್‌ಬಿಐ ಮಂಡಳಿಯಿಂದ ನಾಮನಿರ್ದೇಶನಗೊಂಡ ಒಬ್ಬ ಅಧಿಕಾರಿ ಹಾಗೂ ಕೇಂದ್ರ ಸರ್ಕಾರದಿಂದ ನೇಮಕಗೊಂಡ ಬಾಹ್ಯ ಮೂರು ಸದಸ್ಯರು.
  • ಈ ಬಾಹ್ಯ ಸದಸ್ಯರ ಅವಧಿಯು ನಾಲ್ಕು ವರ್ಷ ದ ವರೆಗೆ ಇರಲಿದೆ.
  • ಸಭೆಯ ಕೋರಂ (ಹಾಜರಿರಬೇಕಾದ ಕನಿಷ್ಠ ಸದಸ್ಯರು) ನಾಲ್ಕು . ಇವರಲ್ಲಿ ಕನಿಷ್ಠ ಪಕ್ಷ ಒಬ್ಬರು ಗವರ್ನರ್ ಆಗಿರಬೇಕು.  ಗವರ್ನರ್ ಅನುಪಸ್ಥಿತಿಯಲ್ಲಿ ಡೆಪ್ಯುಟಿ ಗವರ್ನರ್‌ ಹಾಜರಿರಬೇಕು.
  • ಸಾಮನ್ಯವಾಗಿ ಬಹುಮತದ ಮತದ ಆಧಾರದ ಮೇಲೆ ಹಣಕಾಸು ನೀತಿ ಸಮಿತಿ ಯು ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಒಂದೊಮ್ಮೆ ಮತಗಳು ಸಮ ಸಮ ವಾದರೆ ಆರ್‌ಬಿಐ ಗವರ್ನರ್ ಎರಡನೇ ಬಾರಿ ಮತ ಚಲಾಯಿಸುವ ಅಧಿಕಾರ ಹೊಂದಿದ್ದಾರೆ.
  • ಹಣಕಾಸು ನೀತಿ ಸಮಿತಿಯ ನಿರ್ಧಾರವನ್ನು ಅನಂತರ ಆರ್‌ಬಿಐ ಪಾಲಿಸಲೇಬೇಕು.
Share:

Comments (0)


comments