ಪಿಎಂ ಇಂಟರ್ನ್‌ಶಿಪ್ ಯೋಜನೆ
ವಿವಿಧ ವೃತ್ತಿಗಳಿಗೆ ಸಂಬಂಧಿಸಿದಂತೆ ಯುವಜನರಿಗೆ ತರಬೇತಿ ಅವಕಾಶ ಒದಗಿಸುವ ಬಗ್ಗೆ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಪ್ರಕಟಿಸಿದ್ದ ‘ಪಿಎಂ ಇಂಟರ್ನ್‌ಶಿಪ್ ಯೋಜನೆ’ಗೆ ಡಿಸೆಂಬರ್ 2ರಿಂದ ಚಾಲನೆ ನೀಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.
ಪಿಎಂ ಇಂಟರ್ನ್‌ಶಿಪ್ ಯೋಜನೆಯ ಬಗ್ಗೆ ತಿಳಿಯಿರಿ :
- ಪದವೀಧರರಾಗಿರುವ ಯುವಕರಲ್ಲಿ ಉದ್ಯೋಗಕ್ಕೆ ಬೇಕಾದ ಕೌಶಲ್ಯತೆ ಬೆಳೆಸಿ ಆ ಮೂಲಕ ಅವರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಲು ಈ ಯೋಜನೆಯ ಇಂಟರ್ನ್‌ಶಿಪ್ ಸಹಕಾರಿ.
- ಇಂಟರ್ನ್‌ಶಿಪ್ ಮೂಲಕ ಸುಲಭವಾಗಿ ವಿದ್ಯಾರ್ಥಿಗಳು ಕಂಪನಿಗಳಲ್ಲಿನ ಮ್ಯಾನೇಜ್‌ಮೆಂಟ್, ಕೆಲಸ ವ್ಯವಸ್ಥೆ ಹಾಗೂ ಮುಖ್ಯವಾಗಿ ಕೆಲಸಗಳಲ್ಲಿನ ಕೌಶಲ್ಯವನ್ನು ಕಲಿಯಬಹುದು
- ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಿಂದ ಅಭಿವೃದ್ಧಿಪಡಿಸಿರುವ ಪೋರ್ಟಲ್ ಮೂಲಕ ಯೋಜನೆಯು ಅನುಷ್ಠಾನಗೊಳ್ಳಲಿದೆ.
- ಮುಂದಿನ ಐದು ವರ್ಷದ ಅವಧಿಯಲ್ಲಿ ದೇಶದ ಒಂದು ಕೋಟಿ ಯುವಜನರಿಗೆ ಪ್ರಮುಖ 500 ಕಂಪನಿಗಳಲ್ಲಿ ಉದ್ಯೋಗದ ಬಗ್ಗೆ ತರಬೇತಿ ನೀಡುವುದು ಯೋಜನೆಯಡಿ ಗುರಿ ಹೊಂದಲಾಗಿದೆ. ‘2024-25ನೇ ಆರ್ಥಿಕ ವರ್ಷದಲ್ಲಿ ಸರ್ಕಾರವು ಪ್ರಾಯೋಗಿಕವಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಿದೆ.
- ಸರ್ಕಾರದ ಜೊತೆಗಿನ ಪಾಲುದಾರ ಕಂಪನಿಗಳು ತರಬೇತಿ ನೀಡುತ್ತವೆ. ಸ್ವಯಂಪ್ರೇರಿತವಾಗಿ ಯೋಜನೆಯಡಿ ಪಾಲ್ಗೊಳ್ಳುವ ಕಂಪನಿಗಳು 12 ತಿಂಗಳು ತರಬೇತಿ ನೀಡಬೇಕಿದೆ. ಸಚಿವಾಲಯದ ಒಪ್ಪಿಗೆ ಮೇರೆಗೆ ಇತರೆ ಕಂಪನಿ, ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳು ಕೂಡ ಯೋಜನೆಯಡಿ ಭಾಗವಹಿಸಲು ಅವಕಾಶವಿದೆ.
- 21 ವರ್ಷದಿಂದ 24 ವರ್ಷದ ಒಳಗಿನ ಯುವಜನರು ಅರ್ಹರಾಗಿದ್ದಾರೆ. ಆನ್‌ಲೈನ್ ಅಥವಾ ದೂರಶಿಕ್ಷಣದ ಮೂಲಕ ಶಿಕ್ಷಣ ಪಡೆದವರು ಕೂಡ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿದ್ದಾರೆ.
- ಅರ್ಹತೆ : ಎಸ್‌ಎಸ್ಎಲ್‌ಸಿ ಪಿಯುಸಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು. ಐಟಿಐ ಡಿಪ್ಲೊಮಾ ಕೋರ್ಸ್ ಓದಿದವರು ಅರ್ಹರಾಗಿದ್ದಾರೆ.
- ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕ ₹ 5 ಸಾವಿರ ಭತ್ಯೆ ಸಿಗಲಿದೆ. ಸರ್ಕಾರವು ₹ 4500 ಭರಿಸಿದರೆ ಕಂಪನಿಯು ಸಿಎಸ್ಆರ್ ನಿಧಿಯಡಿ ₹ 500 ಇಂಟರ್ನ್‌ಶಿಪ್ ಭತ್ಯೆ ಪಾವತಿಸಲಿದೆ. ಇದರೊಟ್ಟಿಗೆ ಸಚಿವಾಲಯದಿಂದ ಒಂದು ಬಾರಿ ಪ್ರತಿ ಅಭ್ಯರ್ಥಿಗೆ ₹ 6000 ಧನಸಹಾಯ ನೀಡಲಾಗುತ್ತದೆ. ಕಂಪನಿಗಳು ಸಿಎಸ್‌ಆರ್ ನಿಧಿಯಿಂದ ತರಬೇತಿ ವೆಚ್ಚವನ್ನು ಭರಿಸಲಿದೆ.
- ವಿಮಾ ಸೌಲಭ್ಯ : ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಪಿಎಂ ಜೀವನ್ ಜ್ಯೋತಿ ಬಿಮಾ ಯೋಜನೆ ಮತ್ತು ಪಿಎಂ ಸುರಕ್ಷಾ ಬಿಮಾ ಯೋಜನೆಯಡಿ ವಿಮಾ ಸೌಲಭ್ಯ ಕಲ್ಪಿಸಲಾಗುತ್ತದೆ. ಸರ್ಕಾರವೇ ಈ ವಿಮಾ ಪ್ರೀಮಿಯಂ ಮೊತ್ತವನ್ನು ಪಾವತಿಸಲಿದೆ.
Comments (0)