ಅಂತರರಾಷ್ಟ್ರೀಯ ಹಸ್ತಾಂತರ ಒಪ್ಪಂದಗಳು

ಅಂತರರಾಷ್ಟ್ರೀಯ ಹಸ್ತಾಂತರ ಒಪ್ಪಂದಗಳು ಮತ್ತು ಭಾರತದ ರಣತಂತ್ರ
ಅಂತರರಾಷ್ಟ್ರೀಯ ಮಟ್ಟದಲ್ಲಿ ಅಪರಾಧಿಗಳ ಹಸ್ತಾಂತರವು ಭಾರತದ ಆಂತರಿಕ ಭದ್ರತೆ ಮತ್ತು ನ್ಯಾಯದ ಆಳ್ವಿಕೆಗೆ ಸಂಬಂಧಿಸಿದ ಪ್ರಮುಖ ವಿಷಯವಾಗಿದೆ. ಭಯೋತ್ಪಾದನೆ, ಭೂಗತಪಾತಕ ಚಟುವಟಿಕೆಗಳು ಹಾಗೂ ಆರ್ಥಿಕ ಅಪರಾಧಗಳಿಂದ ದೇಶಕ್ಕೆ ಹಾನಿ ಉಂಟಾಗಿರುವ ಹಿನ್ನೆಲೆಯಲ್ಲಿ, ವಿದೇಶಗಳಲ್ಲಿ ಆಶ್ರಯ ಪಡೆದಿರುವ ಆರೋಪಿಗಳನ್ನು ಹಸ್ತಾಂತರಿಸಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ.


ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ ಮತ್ತು ಮೆಹುಲ್ ಚೋಕ್ಸಿ ಬಂಧನ:
ಭಾರತಕ್ಕೆ ಬೇಕಾಗಿರುವ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ಭಾರತದ ಮನವಿಯ ಮೇರೆಗೆ ಬೆಲ್ಜಿಯಂನಲ್ಲಿ ಬಂಧಿಸಲಾಗಿದೆ.

  • ಮುಂಬೈ ದಾಳಿ ಪ್ರಕರಣದ ಸಂಚುಕೋರ ತಹವ್ವುರ್ ರಾಣಾನನ್ನು ಅಮೆರಿಕವು ಭಾರತಕ್ಕೆ ಹಸ್ತಾಂತರಿಸಿದ ಕೆಲವೇ ದಿನಗಳಲ್ಲಿ ಚೋಕ್ಸಿಯ ಬಂಧನ ನಡೆದಿದೆ.

  • ಚೋಕ್ಸಿಯ ಹಸ್ತಾಂತರಕ್ಕಾಗಿ ಭಾರತವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.


ಭಾರತದ ಹಸ್ತಾಂತರ ಪ್ರಯತ್ನಗಳು:

  • ವಿದೇಶದಲ್ಲಿ ಆಶ್ರಯ ಪಡೆದಿರುವ ಭಯೋತ್ಪಾದಕರು, ಭೂಗತಪಾತಕರು, ಆರ್ಥಿಕ ಅಪರಾಧಿಗಳನ್ನು ಹಸ್ತಾಂತರಿಸಲು ಕೇಂದ್ರ ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ.

  • ದೇಶಭ್ರಷ್ಟರು ಮತ್ತು ಅಪರಾಧಿಗಳನ್ನು ಭಾರತಕ್ಕೆ ಹಸ್ತಾಂತರಿಸುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು 178 ಮಂದಿಯ ಪಟ್ಟಿಯನ್ನು ವಿವಿಧ ದೇಶಗಳಿಗೆ ಮನವಿ ಮಾಡಿದೆ.

  • ಕಳೆದ 5 ವರ್ಷಗಳಲ್ಲಿ ಕೇವಲ 23 ಮಂದಿಯನ್ನಷ್ಟೇ ಭಾರತಕ್ಕೆ ಹಸ್ತಾಂತರಿಸಲಾಗಿದೆ.


ಭಾರತದ ಅಂತಾರಾಷ್ಟ್ರೀಯ ಹಸ್ತಾಂತರ ಒಪ್ಪಂದಗಳು:

  • ಭಾರತವು ಅಮೆರಿಕ, ಕೆನಡಾ, ಬ್ರಿಟನ್, ಯುಎಇ ಸೇರಿದಂತೆ 48 ದೇಶಗಳೊಂದಿಗೆ ಹಸ್ತಾಂತರ ಒಪ್ಪಂದ ಮಾಡಿಕೊಂಡಿದೆ.

  • ಸಿಂಗಪುರ, ಸ್ವೀಡನ್, ಇಟಲಿ ಸೇರಿದಂತೆ 12 ರಾಷ್ಟ್ರಗಳೊಂದಿಗೆ ಹಸ್ತಾಂತರ ಸಂಬಂಧಿತ ವ್ಯವಸ್ಥೆ ಇದೆ.


ಪ್ರಮುಖ ಹಸ್ತಾಂತರ ಪ್ರಕರಣಗಳು:

  • ತಹವ್ವುರ್ ರಾಣಾ — 26/11 ಮುಂಬೈ ದಾಳಿಯ ಸಂಚುಕೋರ, ಅಮೆರಿಕದಿಂದ ಭಾರತಕ್ಕೆ ಹಸ್ತಾಂತರ.

  • ಅಬು ಸಲೇಂ — 1993 ಮುಂಬೈ ಸ್ಫೋಟ ಪ್ರಕರಣದ ಆರೋಪಿತ, ಪೋರ್ಚುಗಲ್‌ನಿಂದ 2005ರಲ್ಲಿ ಹಸ್ತಾಂತರ.

  • ಛೋಟಾ ರಾಜನ್ — ಪಾತಕಿ, ಇಂಡೋನೇಷ್ಯಾದಿಂದ 2015ರಲ್ಲಿ ಹಸ್ತಾಂತರ.

  • ಕ್ರಿಸ್ಟಿಯನ್ ಮೈಕೆಲ್ — ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಹಗರಣದ ಮಧ್ಯವರ್ತಿ, ಯುಎಇಯಿಂದ 2018ರಲ್ಲಿ ಹಸ್ತಾಂತರ.

  • ರವಿಪೂಜಾರಿ — ಭೂಗತಪಾತಕಿ, ಸೆನೆಗಲ್‌ನಿಂದ 2020ರಲ್ಲಿ ಹಸ್ತಾಂತರ.


ಭಾರತಕ್ಕೆ ಬೇಕಿರುವ ಪ್ರಮುಖ ಭೂಗತಪಾತಕರು ಮತ್ತು ಆರ್ಥಿಕ ಅಪರಾಧಿಗಳು:

  • ದಾವೂದ್ ಇಬ್ರಾಹಿಂ:

    • 1993 ಮುಂಬೈ ಬಾಂಬ್ ಸ್ಫೋಟದ ಪ್ರಮುಖ ಸಂಚುಕೋರ.

    • ಪಾಕಿಸ್ತಾನದ ಕರಾಚಿಯಲ್ಲಿ ಆಶ್ರಯ ಪಡೆದಿರುವ ಮಾಹಿತಿ.

    • ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಮತ್ತು ಮಾದಕ ದ್ರವ್ಯ ವ್ಯಾಪಾರದ ಜಾಲದಲ್ಲಿ ಸಕ್ರಿಯ.


  • ಟೈಗರ್ ಮೆಮನ್:

    • 1993 ಮುಂಬೈ ಸ್ಫೋಟದ ಮುಖ್ಯ ಸಂಚುಕೋರ.

    • ಪಾಕಿಸ್ತಾನದಲ್ಲಿ ಆಶ್ರಯ ಪಡೆದಿರುವ ಶಂಕೆ.


  • ವಿಜಯ್ ಮಲ್ಯ:

    • ₹9,000 ಕೋಟಿ ಬ್ಯಾಂಕ್ ಸಾಲ ವಂಚನೆ ಪ್ರಕರಣದ ಪ್ರಮುಖ ಆರೋಪಿ.

    • 2016ರಲ್ಲಿ ಪರಾರಿ; 2019ರಲ್ಲಿ ಆರ್ಥಿಕ ಅಪರಾಧಿ ಎಂದು ಘೋಷಣೆ.

    • ಬ್ರಿಟನ್‌ನಲ್ಲಿ ವಾಸವಿದ್ದು, ಹಸ್ತಾಂತರದ ವಿರುದ್ಧ ಕಾನೂನು ಹೋರಾಟ.


  • ಸೌರಭ್ ಚಂದ್ರಾಕರ್:

    • ಮಹದೇವ್ ಆನ್‌ಲೈನ್ ಬೆಟ್ಟಿಂಗ್ ಹಗರಣದ ಸಂಚುಕೋರ.

    • ₹6,000 ಕೋಟಿ ಮೊತ್ತದ ವಂಚನೆ.

    • 2024ರ ಅಕ್ಟೋಬರ್‌ನಲ್ಲಿ ದುಬೈನಲ್ಲಿ ಬಂಧನ.


  • ಅರ್ಶ್ ಡಲ್ಲಾ:

    • ಖಾಲಿಸ್ತಾನ್ ಟೈಗರ್ ಫೋರ್ಸ್‌ನ ಪ್ರಮುಖ ಭಯೋತ್ಪಾದಕ.

    • 50ಕ್ಕೂ ಹೆಚ್ಚು ಪ್ರಕರಣಗಳು ದಾಖಲು.

    • ಕೆನಡಾದಲ್ಲಿ ವಾಸ, ಹಸ್ತಾಂತರ ಪ್ರಯತ್ನ ನಡೆಯುತ್ತಿದೆ.


  • ನೀರವ್ ಮೋದಿ:

    • ಪಿಎನ್‌ಬಿ ಹಗರಣದಲ್ಲಿ ₹13,800 ಕೋಟಿ ವಂಚನೆ.

    • 2019ರ ಮಾರ್ಚ್‌ 19ರಂದು ಇಂಗ್ಲೆಂಡ್‌ನಲ್ಲಿ ಬಂಧನ.

    • ಹಸ್ತಾಂತರಕ್ಕೆ 2021ರಲ್ಲಿ ಕೋರ್ಟ್ ಅನುಮೋದನೆ; ನ್ಯಾಯಾಂಗ ಹೋರಾಟ ಮುಂದುವರಿದಿದೆ.


  • ಲಲಿತ್ ಮೋದಿ:

    • ಐಪಿಎಲ್‌ ಹಣಕಾಸು ಹಗರಣದ ಆರೋಪಿತ.

    • 2010ರಿಂದ ಲಂಡನ್‌ನಲ್ಲಿ ವಾಸವಿದ್ದು, ಹಲವು ಅಕ್ರಮ ಪ್ರಕರಣಗಳಲ್ಲಿ ತನಿಖೆ ಎದುರಿಸುತ್ತಿದ್ದಾರೆ.


  • ಸಂಜಯ್ ಭಂಡಾರಿ:

    • ಶಸ್ತ್ರಾಸ್ತ್ರ ಮಧ್ಯವರ್ತಿ.

    • 2016ರಲ್ಲಿ ಬ್ರಿಟನ್‌ಗೆ ಪರಾರಿ.

    • ಬ್ರಿಟನ್‌ ಹೈಕೋರ್ಟ್ ಹಸ್ತಾಂತರ ತಡೆ ನೀಡಿದೆ.


ಭಯೋತ್ಪಾದನೆ ಮತ್ತು ಗ್ಯಾಂಗ್‌ಸ್ಟರ್ ಕೃತ್ಯಗಳಲ್ಲಿ ಪ್ರಮುಖ ಆರೋಪಿಗಳು:

  • ಗೋಲ್ಡಿ ಬ್ರಾರ್:

    • ಭಯೋತ್ಪಾದಕ; ಸಿದ್ದು ಮೂಸೆವಾಲಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ.

    • ಭಾರತವು ₹10 ಲಕ್ಷ ಬಹುಮಾನ ಘೋಷಿಸಿದೆ.


  • ಅನ್ಮೋಲ್ ಬಿಷ್ಣೋಯಿ:

    • ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿಯ ತಮ್ಮ.

    • ಅಮೆರಿಕದಲ್ಲಿ ನೆಲೆಸಿದ್ದು, ಕೊಲೆ ಪ್ರಕರಣಗಳಲ್ಲಿ ಆರೋಪಿ.

    • ₹10 ಲಕ್ಷ ಬಹುಮಾನ ಘೋಷಣೆ.

 

ಮಾಹಿತಿ : ಪ್ರಜಾವಾಣಿ 

Share:

Comments (0)


comments