ಸಿಂಧೂ ಜಲ ಒಪ್ಪಂದದ ಅಮಾನತು

ಸಿಂಧೂ ಜಲ ಒಪ್ಪಂದದ ಅಮಾನತು: ಭಾರತ-ಪಾಕಿಸ್ತಾನ ಸಂಬಂಧದಲ್ಲಿ ಹೊಸ ಅಧ್ಯಾಯ ?

ಪ್ರಸ್ತಾವನೆ:

1947ರಲ್ಲಿ ಭಾರತದಿಂದ ಪಾಕಿಸ್ತಾನ ಬೇರ್ಪಟ್ಟ ನಂತರ, ಎರಡೂ ದೇಶಗಳ ನಡುವೆ ಸಾಕಷ್ಟು ಸಂಘರ್ಷಗಳು, ಯುದ್ಧಗಳು ಹಾಗೂ ರಾಜತಾಂತ್ರಿಕ ಉದ್ವೇಗಗಳು ನಡೆದಿವೆ. ಆದರೆ ಇದೇ ಮೊದಲ ಬಾರಿ ಸಿಂಧೂ ಜಲ ಒಪ್ಪಂದವನ್ನು ಅಮಾನತು ಮಾಡಲಾಗಿದೆ.


ಭಾರತ - ಪಾಕಿಸ್ತಾನ ನಡುವಿನ ಸಂಘರ್ಷಗಳು:

  • 1947ರಿಂದ ಇಲ್ಲಿವರೆಗೆ ನಾಲ್ಕು ಯುದ್ಧಗಳು ನಡೆದಿವೆ.

  • ಅನೇಕ ಭಯೋತ್ಪಾದಕ ಕೃತ್ಯಗಳು, ವಾಗ್ವಾದಗಳು ವರದಿಯಾಗಿವೆ.

  • 2016ರಲ್ಲಿ ಉರಿ ದಾಳಿಗೆ ಪ್ರತಿಯಾಗಿ ಸರ್ಜಿಕಲ್ ಸ್ಟ್ರೈಕ್,

  • 2019ರಲ್ಲಿ ಪುಲ್ವಾಮಾ ದಾಳಿಗೆ ಪ್ರತಿಯಾಗಿ ಬಾಲಾಕೋಟ್ ವಾಯುದಾಳಿ.

  • ವೀಸಾ ನಿಯಮ ಬದಲಾವಣೆ, ರಾಜತಾಂತ್ರಿಕರು ವಾಪಸ್‌ ಕರೆಸಿಕೊಳ್ಳುವುದು ಮುಂತಾದ ಕ್ರಮಗಳು.

  • ಆದರೆ, ಸಿಂಧೂ ಜಲ ಒಪ್ಪಂದವನ್ನು ಅಮಾನತು ಮಾಡಿರುವುದು ಇದೇ ಮೊದಲು.


ಸಿಂಧೂ ನದಿ ವ್ಯವಸ್ಥೆಯ ಮಹತ್ವ:

  • ಸಿಂಧೂ ನದಿಯು ಅದರ ಐದು ಉಪನದಿಗಳನ್ನು ಒಳಗೊಂಡಿದೆ:
    ಸಟ್ಲೇಜ್, ರಾವಿ, ಬ್ಯಾಸ್, ಝೇಲಮ್‌, ಚಿನಾಬ್.

  • ಹಿಮಾಲಯದಲ್ಲಿ ಹುಟ್ಟುತ್ತವೆ → ಭಾರತ → ಪಾಕಿಸ್ತಾನ → ಅರಬ್ಬಿ ಸಮುದ್ರ.

  • ಎರಡೂ ರಾಷ್ಟ್ರಗಳು ಕೃಷಿ ಹಾಗೂ ನೀರಾವರಿ ಉದ್ದೇಶಗಳಿಗೆ ಬಳಸಿಕೊಳ್ಳುತ್ತವೆ.


1960ರ ಸಿಂಧೂ ಜಲ ಒಪ್ಪಂದ:

  • 1960 ಸೆಪ್ಟೆಂಬರ್ 19 ರಂದು ಕರಾಚಿಯಲ್ಲಿ ಸಹಿ.

  • ವಿಶ್ವಬ್ಯಾಂಕ್ ಮಧ್ಯಸ್ಥಿಕೆ.

  • ಪೂರ್ವ ನದಿಗಳು → ಭಾರತ; ಪಶ್ಚಿಮ ನದಿಗಳು → ಪಾಕಿಸ್ತಾನ.

  • ಭಾರತಕ್ಕೆ 34 ಲಕ್ಷ ಎಕರೆ ಅಡಿಗಳಷ್ಟು ನೀರಿನ ಸಂಗ್ರಹ ಅನುಮತಿ.


ನಿಯಂತ್ರಿತ ಹರಿವಿನ ಅಂಶ:

  • ಪಶ್ಚಿಮ ನದಿಗಳ ಸ್ವಾಭಾವಿಕ ಹರಿವಿಗೆ ತಡೆ ಇಲ್ಲ.

  • ಆದರೆ ನಿಯಂತ್ರಿತ ಹರಿವಿನಲ್ಲಿ ಬಗ್ಲಿಹಾರ್‌ ಅಣೆಕಟ್ಟು ಮುಂತಾದ ಯೋಜನೆಗಳಿಂದ ನೀರನ್ನು ಸ್ಥಗಿತಗೊಳಿಸಬಹುದು.

  • ಈ ನೀರು ಪಾಕಿಸ್ತಾನದ ಕೃಷಿ, ಕುಡಿಯುವ ನೀರಿಗಾಗಿ ಮುಖ್ಯ.


ಅಣೆಕಟ್ಟುಗಳು ಹಾಗೂ ಯೋಜನೆಗಳ ಮಹತ್ವ:

  • ಪಕಲ್ ದುಲ್, ಸವಾಲ್‌ಕೋಟ್‌ನಂಥ ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸಿದರೆ:

    • ಹೆಚ್ಚು ನೀರು ಸಂಗ್ರಹ ಸಾಧ್ಯ

    • ಭಾರತಕ್ಕೆ ಹೆಚ್ಚು ಹಿಡಿತ ಸಿಗುತ್ತದೆ.


ಪರಿಶೀಲನೆಗೆ ಅನುಮತಿಯಿಲ್ಲದ ತೀರ್ಮಾನ:

  • 2019: ಪುಲ್ವಾಮಾ ನಂತರ ಎಂಟು ಜಲವಿದ್ಯುತ್ ಯೋಜನೆಗಳಿಗೆ ಅನುಮೋದನೆ.

  • ಪಾಕಿಸ್ತಾನ ಅಧಿಕಾರಿಗಳು ಪರಿಶೀಲನೆಗೆ ಬರುವ ಅವಕಾಶವಿತ್ತು.

  • ಒಪ್ಪಂದ ಅಮಾನತಿನಿಂದ ಇನ್ನು ಪರಿಗಣನೆ ಬೇಕಿಲ್ಲ.


ಹೂಳೆತ್ತುವ ನಿಯಮದ ಬದಲಾವಣೆ:

  • ಹಿಂದಿನ ನಿಯಮ: ಆಗಸ್ಟ್‌ನಲ್ಲಿ ಮಾತ್ರ ಹೂಳೆತ್ತುವ ಅನುಮತಿ.

  • ಈಗ: ಯಾವ ಋತುವಿನಲ್ಲಿ ಬೇಕಾದರೂ ಸಾಧ್ಯ.


ದತ್ತಾಂಶ ಹಂಚಿಕೆ ಸ್ಥಗಿತ:

  • ಹರಿವಿನ ಬಗ್ಗೆ ಮಾಹಿತಿ ಹಂಚಿಕೆ ಒಪ್ಪಂದದ ಒಂದು ಅಂಶ.

  • ಇನ್ನು ಮುಂದೆ ಭಾರತವು ಮಾಹಿತಿ ಹಂಚಿಕೊಳ್ಳದೇ ಇರಬಹುದಾಗಿದೆ.


ಏಕಪಕ್ಷೀಯ ಅಮಾನತು – ಆಕ್ಷೇಪ:

  • ಒಪ್ಪಂದದ ಪ್ರಕಾರ:

    • ಬದಲಾವಣೆಗಾಗಿ ಭಾರತ, ಪಾಕಿಸ್ತಾನ ಹಾಗೂ ವಿಶ್ವಬ್ಯಾಂಕ್ ಅನುಮತಿ ಅಗತ್ಯ.

    • 2022ರಲ್ಲಿ ಭಾರತ ನೋಟಿಸ್‌ ನೀಡಿತ್ತು.

  • ಪಾಕಿಸ್ತಾನ:

    • ಭಾರತ ಏಕಪಕ್ಷೀಯವಾಗಿ ತೀರ್ಮಾನಿಸುತ್ತಿದೆ – ಅಂತರರಾಷ್ಟ್ರೀಯ ಕಾನೂನು ಉಲ್ಲಂಘನೆ ಎಂಬ ಆರೋಪ.


ಅಟ್ಟಾರಿ – ವಾಘಾ ಗಡಿ ಮುಚ್ಚುವ ಪರಿಣಾಮ:

  • ಭಾರತ – ಪಾಕಿಸ್ತಾನ ನಡುವಿನ ಏಕೈಕ ಕಾನೂನುಬದ್ಧ ರಸ್ತೆ ಮಾರ್ಗ.

  • ಅಫ್ಗಾನಿಸ್ತಾನ ಕೂಡ ಇದರ ಮೂಲಕ ವಹಿವಾಟು ನಡೆಸುತ್ತದೆ.

  • ಗಡಿ ಮುಚ್ಚುವ ನಿರ್ಧಾರದಿಂದ:

    • ದ್ವಿಪಕ್ಷೀಯ ವ್ಯಾಪಾರದ ಮೇಲೆ ಪರಿಣಾಮ

    • ಅಫ್ಗಾನಿಸ್ತಾನ – ಭಾರತದ ವ್ಯವಹಾರದ ಮೇಲೆ ಬಿಕ್ಕಟ್ಟು.

  • 2018 ನಂತರ ಸಂಬಂಧ ಹಳಸಿದ್ದರೂ ಸಣ್ಣ ಪ್ರಮಾಣದ ವ್ಯಾಪಾರ ಮುಂದುವರಿದಿತ್ತು.

Share:

Comments (0)


comments