ಜಾಗತಿಕ ಜಲ ಸಂಪನ್ಮೂಲ ವರದಿ 2023
ಜಾಗತಿಕ ಜಲ ಸಂಪನ್ಮೂಲಗಳ ಪ್ರಸ್ತುತ ಸ್ಥಿತಿಗತಿಗಳ ಕುರಿತು ವಿಶ್ವಸಂಸ್ಥೆಯ ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ಬಿಡುಗಡೆ ಮಾಡಿರುವ ವರದಿ ಆತಂಕಕಾರಿ ಸಂಗತಿಯನ್ನು ಬೆಳಕಿಗೆ ತಂದಿದೆ.
ವರದಿಯ ಬಗ್ಗೆ ತಿಳಿಯಿರಿ :
- ವಿಶ್ವ ಹವಾಮಾನ ಸಂಸ್ಥೆ ಯು 2021 ರಿಂದ ಈ ವಾರ್ಷಿಕ ವರದಿಯನ್ನು ಪ್ರಕಟಿಸುತ್ತಿದೆ.
- ಜಾಗತಿಕ ನೀರಿನ ಸಂಪನ್ಮೂಲಗಳ ಕುರಿತ ಸಮಗ್ರ ಹಾಗೂ ಸ್ಥಿರವಾದ ಸಂಪೂರ್ಣ ಅವಲೋಕನವನ್ನು ಈ ವರದಿ ಒದಗಿಸುತ್ತದೆ.
2023 ರ ವರದಿಯ ಮುಖ್ಯ ಅಂಶಗಳು :
- 2023 ರಲ್ಲಿ ಪ್ರಪಂಚದ ಬಹುತೇಕ ಜೀವನದಿಗಳು ನೀರು ಹರಿವಿನ ಪ್ರಮಾಣದಲ್ಲಿ ದೊಡ್ಡ ಮಟ್ಟದ ಕುಸಿತವನ್ನು ಕಂಡಿದೆ,
- ಕಳೆದ 33 ವರ್ಷಗಳಿಗೆ ಹೋಲಿಸಿದರೆ ನೀರಿನ ಹರಿವಿನ ಪ್ರಮಾಣ 2023 ರಲ್ಲಿ ಅತ್ಯಂತ ಕಡಿಮೆಯಿದೆ.
- ಕಳೆದ ಐದು ವರ್ಷಗಳಲ್ಲಿ ಹೆಚ್ಚಿನ ನದಿಗಳಲ್ಲಿ ನೀರಿನ ಹರಿವು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಿದೆ.
- ಈ ಪರಿಸ್ಥಿತಿಯು ಕೃಷಿ ಮತ್ತು ಕೈಗಾರಿಕೆಗಳಿಗೆ ನೀರಿನ ಲಭ್ಯತೆಯನ್ನು ಕಡಿಮೆ ಮಾಡಿದೆ ಎಂದು ವರದಿ ಎಚ್ಚರಿಸಿದೆ. "ಇದು ನಮ್ಮ ಹವಾಮಾನ ಬಿಕ್ಕಟ್ಟಿನ ಅತ್ಯಂತ ಪ್ರಮುಖ ಸೂಚನೆಗಳಲ್ಲಿ ಒಂದಾಗಿದೆ.
- ಕಳೆದ 50 ವರ್ಷಗಳಲ್ಲಿ ಹಿಮನದಿಗಳು ದಾಖಲೆಯ ಪ್ರಮಾಣದಲ್ಲಿ ಕರಗುತ್ತಿವೆ. ವರ್ಷಕ್ಕೆ 600 ಗಿಗಾ ಟನ್ ನೀರು ನಷ್ಟವಾಗುತ್ತಿದೆ
- ಪ್ರಸ್ತುತ ಜಗತ್ತಿನ 3.6 ಶತಕೋಟಿ ಜನರು ವರ್ಷದಲ್ಲಿ ಕನಿಷ್ಠ ಒಂದು ತಿಂಗಳು ನೀರಿನ ತೀವ್ರ ಅಭಾವ ಎದುರಿಸುತ್ತಿದ್ದಾರೆ. ಈ ಸಂಖ್ಯೆ 2050 ರ ಹೊತ್ತಿಗೆ 5 ಶತಕೋಟಿ ಗೆ ಏರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
- ಜಲಾಶಯಗಳನ್ನು ಸಂರಕ್ಷಿಸಲು ತುರ್ತು ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಮತ್ತು ಜಲವಿಜ್ಞಾನ ಮೇಲ್ವಿಚಾರಣೆಯನ್ನು ಹೆಚ್ಚಿಸಬೇಕಾಗಿದೆ
- ನೀರು ಮತ್ತು ನೈರ್ಮಲ್ಯದ ಮೇಲೆ ಕೇಂದ್ರೀಕರಿಸುವ ಸುಸ್ಥಿರ ಅಭಿವೃದ್ಧಿ ಗುರಿ 6 ಅನ್ನು ಸಾಧಿಸುವ ಪ್ರಯತ್ನದಲ್ಲಿ ಜಗತ್ತು ತುಂಬಾ ಹಿಂದುಳಿದಿದೆ ಎಂದು ವರದಿಯಾಗಿದೆ.
Comments (0)