21 ನೇ ರಾಷ್ಟ್ರೀಯ ಜಾನುವಾರು ಗಣತಿ

21 ನೇ ರಾಷ್ಟ್ರೀಯ ಜಾನುವಾರು ಗಣತಿ  

  • ಕೇಂದ್ರ ಮೀನುಗಾರಿಕೆ, ಪಶು ಸಂಗೋಪನೆ, ಮತ್ತು ಹೈನುಗಾರಿಕೆ ಸಚಿವಾಲಯದಿಂದ ಹಮ್ಮಿಕೊಂಡಿರುವ 21 ನೇ ರಾಷ್ಟ್ರೀಯ ಜಾನುವಾರು ಗಣತಿಗೆ ಇತ್ತೀಚೆಗೆ ನವದೆಹಲಿಯಲ್ಲಿ ಚಾಲನೆ ನೀಡಲಾಯಿತು.

ರಾಷ್ಟ್ರೀಯ ಜಾನುವಾರು ಗಣತಿ ಯ ಬಗ್ಗೆ ತಿಳಿಯಿರಿ :

  • ಪ್ರತೀ 5  ವರ್ಷಕ್ಕೊಮ್ಮೆ ದೇಶದಲ್ಲಿ ಜಾನುವಾರು ಗಣತಿ ನಡೆಯುತ್ತದೆ.
  • ನಮ್ಮ ದೇಶದಲ್ಲಿರುವ ಸಾಕು ಪ್ರಾಣಿಗಳು, ಕೋಳಿ ಸಾಕಣೆ ಕೇಂದ್ರದಲ್ಲಿರುವ ಕೋಳಿಗಳನ್ನು, ಹಾಗೂ ಇತರ ನಿರ್ಗತಿಕ ಬೀಡಾಡಿ ಪ್ರಾಣಿಗಳನ್ನೂ ಗಣತಿಯಲ್ಲಿ ಎಣಿಕೆ ಮಾಡಲಾಗುತ್ತದೆ.
  • ಸಚಿವಾಲಯ : ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಹಭಾಗಿತ್ವದಲ್ಲಿ ಗಣತಿಯನ್ನು ನಡೆಸುತ್ತದೆ.
  • ಜಾನುವಾರು ಗಣತಿ ಸಂದರ್ಭದಲ್ಲಿ, ಯಾವ ತಳಿಯ ಜಾನುವಾರುಗಳು? ಯಾವ ವಯಸ್ಸು? ಯಾವ ಲಿಂಗ ? ಯಾರು ಈ ಪ್ರಾಣಿಗಳ ಮಾಲೀಕರು?, ಎಷ್ಟು ರೈತರು?, ಯಾವ ವರ್ಗದ ರೈತರು?, ಎಷ್ಟು ಮಹಿಳೆಯರು ಇದರಲ್ಲಿ ತೊಡಗಿಸಿಕೊಂಡಿದ್ದಾರೆ? ಎಂಬ ಮಾಹಿತಿ ಕಲೆ ಹಾಕಲಾಗುತ್ತದೆ.
  • ಜಾನುವಾರು ಗಣತಿಯನ್ನು 1919 ರಿಂದ ನಡೆಸಲಾಗುತ್ತಿದೆ. ಕಳೆದ 100 ವರ್ಷಗಳಲ್ಲಿ ಒಟ್ಟು 20 ಗಣತಿಗಳು ನಡೆದಿದೆ. ಕಳೆದ ಬಾರಿಯ ಗಣತಿ 2019 ರಲ್ಲಿ ನಡೆದಿತ್ತು.

21ನೇ ಜಾನುವಾರು ಗಣತಿಯ ಪ್ರಮುಖ ಲಕ್ಷಣಗಳು:

  • ಅಕ್ಟೋಬರ್ 2024 ರಿಂದ ಫೆಬ್ರವರಿ 2025 ರವರೆಗೆ 4 ತಿಂಗಳ ಕಾಲ ಈ ಬೃಹತ್ ಸಮೀಕ್ಷೆ ನಡೆಯುತ್ತದೆ.
  • ಕಳೆದ ಬಾರಿ 2019 ರಲ್ಲಿ ನಡೆದ ಗಣತಿಯಂತೆಯೇ ಈ ಬಾರಿಯೂ ಜಾನುವಾರು ಗಣತಿಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲಾಗುವುದು.
  • 21 ನೇ ಜಾನುವಾರು ಗಣತಿ ಎಂಬ ಮೊಬೈಲ್ ಅಪ್ಲಿಕೇಶನ್ ಸಿದ್ಧಪಡಿಸಲಾಗಿದ್ದು ಆ ಮೂಲಕ ಆನ್‌ಲೈನ್ ಡೇಟಾ ಸಂಗ್ರಹಣೆ, ಡಿಜಿಟಲ್ ಡ್ಯಾಶ್‌ಬೋರ್ಡ್ ಮೂಲಕ ಮೇಲ್ವಿಚಾರಣೆ, ಸ್ಥಳ ಟ್ರ್ಯಾಕಿಂಗನ್ನು ಮಾಡಲಾಗುತ್ತದೆ. ಕೊನೆಗೆ ಇವೆಲ್ಲದರ ಸಿದ್ದವಾದ ವರದಿ ಅಪ್ಲಿಕೇಶನ್ ನಲ್ಲೇ ಮೂಡಿಬರುತ್ತದೆ.
  • 16 ಜಾತಿಯ ಜಾನುವಾರುಗಳು ಹಾಗೂ ಅವುಗಳ 219  ತಳಿಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.
  • ಜಾನುವಾರುಗಳು ಮಾತ್ರವಲ್ಲದೆ ಇವುಗಳನ್ನು ಸಲಹುವ ಪಶುಪಾಲಕರ ಸಂಖ್ಯಾ ವರದಿಯನ್ನೂ ಹಾಗೂ ಜಾನುವಾರು ಪಾಲನೆಯಲ್ಲಿ ಮಹಿಳೆಯರ ಪಾತ್ರವನ್ನೂ ವಿಶ್ಲೇಷಿಸಲಾಗುತ್ತದೆ.
Share:

Comments (0)


comments