ಜಿವಿತ್ ಪುತ್ರಿಕಾ ಉತ್ಸವ 

ಜಿವಿತ್ ಪುತ್ರಿಕಾ ಉತ್ಸವ 

ಬಿಹಾರದಲ್ಲಿ ಜೀವಿತ್ ಪುತ್ರಿಕಾ ವ್ರತ ಅಚರಣೆ ವೇಳೆ ಭಾರಿ ದುರ್ಘಟನೆ ಸಂಭವಿಸಿದೆ. ನದಿ ಹಾಗೂ ಕೊಳಗಳಲ್ಲಿ ಪುಣ್ಯ ಸ್ನಾನ ಮಾಡುವ ವೇಳೆ ಬಿಹಾರದ ಅನೇಕ ಭಾಗಗಳಲ್ಲಿ 46 ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇದರಲ್ಲಿ 37 ಮಂದಿ ಮಕ್ಕಳೂ ಇದ್ದಾರೆ.

ಜಿವಿತ್ ಪುತ್ರಿಕಾ ಉತ್ಸವದ ಬಗ್ಗೆ ತಿಳಿಯಿರಿ :

  • ಜಿತಿಯಾ ಅಥವಾ 'ಜೀವಿತ್‌ ಪುತ್ರಿಕಾ' ಎಂದು ಕರೆಯಲ್ಪಡುವ ಈ ಉತ್ಸವವು ಮೂರು ದಿನಗಳ ಹಿಂದೂ ಹಬ್ಬವಾಗಿದ್ದು ಇದನ್ನು ಪ್ರಮುಖವಾಗಿ ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್ ಹಾಗೂ ನೇಪಾಳ ದಲ್ಲಿ ಆಚರಿಸಲಾಗುತ್ತದೆ. 
  • ಇದು ಮಕ್ಕಳ ಯೋಗಕ್ಷೇಮಕ್ಕಾಗಿ, ಸಮೃದ್ಧಿಗಾಗಿ ತಾಯಂದಿರು ಆಚರಿಸುವ ವಿಶೇಷ ಹಬ್ಬವಾಗಿದೆ. 
  •  ಬೆಳಗ್ಗೆಯಿಂದ 'ನಿರ್ಜಲ ಉಪವಾಸ', ಅಂದರೆ ಉಪವಾಸದ ಸಂದರ್ಭದಲ್ಲಿ ನೀರೂ ಸಹ ಕುಡಿಯದೆ ಕಟ್ಟುನಿಟ್ಟಿನ ವ್ರತ ಆಚರಿಸುವ ಮಹಿಳೆಯರು ಸಂಜೆ ಮಕ್ಕಳ ಜತೆ ನದಿ ಮತ್ತು ಕೊಳಗಳಲ್ಲಿ ಪುಣ್ಯ ಸ್ನಾನ ಮಾಡುವುದು ವಾಡಿಕೆ. ಮೂರು ದಿನಗಳ ಕಾಲ ಈ ಆಚರಣೆ ನಡೆಯುತ್ತದೆ.
  • ತಾಯಂದಿರ ಪ್ರೀತಿ ಹಾಗೂ ಭಕ್ತಿಯನ್ನು ಬಿಂಬಿಸಲು ಉಪವಾಸ ಆಚರಿಸಲಾಗುತ್ತದೆ. ಇದರಿಂದ ತಮ್ಮ ಮಕ್ಕಳ ಮೇಲೆ ದೇವರ ಆಶೀರ್ವಾದ ಇರುತ್ತದೆ ಎನ್ನುವುದು ಅವರ ನಂಬಿಕೆ.
  • ಈ ಹಬ್ಬದ ಮೂಲವು ಹಿಂದೂ ಧರ್ಮದ ಪುರಾಣಗಳಲ್ಲಿ ಕಂಡುಬರುತ್ತದೆ.
  • ಇತರರ ಕಲ್ಯಾಣಕ್ಕಾಗಿ ರಾಜ ಜಿಮೂತವಾಹನನ ಮಾಡಿದ ತ್ಯಾಗವನ್ನು ಈ ಸಮಯದಲ್ಲಿ ಸ್ಮರಿಸಲಾಗುತ್ತದೆ.
  • ಈ ಆಚರಣೆಯು ನಹೈ-ಖೈ ಎಂಬ ಪದ್ಧತಿಯೊಂದಿಗೆ ಪ್ರಾರಂಭವಾಗತ್ತದೆ. ಈ ಸಮಯದಲ್ಲಿ ತಾಯಂದಿರು  ನದಿಯಲ್ಲಿ ಪವಿತ್ರ ಸ್ನಾನವನ್ನು ಮಾಡಿ ಊಟವನ್ನು ಸೇವಿಸುತ್ತಾರೆ.
  • ಎರಡನೇ ದಿನದಂದು ಪೂರ್ತಿ ದಿನ ಕಠಿಣ ಉಪವಾಸವನ್ನು ಕೈಗೊಳ್ಳಲಾಗುತ್ತದೆ. ಮೂರನೇ ದಿನದ 'ಪಾರನ್ ನಂತರ ಊಟವನ್ನು ಮಾಡುವ ಮೂಲಕ ವ್ರತವನ್ನು ಮುಕ್ತಾಯಗೊಳಿಸಲಾಗುತ್ತದೆ.

ಸಾಮಾನ್ಯವಾಗಿ ತಾಯಂದಿರು ತಮ್ಮ ಮಕ್ಕಳಿಗೋಸ್ಕರ ಈ ವ್ರತ ಮಾಡುತ್ತಾರೆ. ಆದರೆ ಇತರ ಮಹಿಳೆಯರು ಮತ್ತು ಕೆಲವು ಪುರುಷರು ಸಹಾ ತಮ್ಮ ಪ್ರೀತಿಪಾತ್ರರಿಗೆ ಒಳ್ಳೆಯದಾಗಲಿ ಎಂಬ ನಿಟ್ಟಿನಲ್ಲಿ ವ್ರತವನ್ನು ಆಚರಿಸುವುದು ಕಂಡುಬರುತ್ತದೆ.
 

Share:

Comments (0)


comments